ಈ ಯೋಜನೆಯು ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಸಮತೆ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ನಮ್ಮ ಪ್ರಯತ್ನದ ಭಾಗವಾಗಿದೆ.
ʼಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್ʼ ಹುಡುಗಿಯರು ಉನ್ನತ ಶಿಕ್ಷಣವನ್ನು ಪಡೆಯುವಾಗ ಎದುರಿಸುವ ಆರ್ಥಿಕ ಸವಾಲುಗಳನ್ನು ಕಡಿಮೆ ಮಾಡುವ ಮೂಲಕ ಅವರಿಗೆ ನೆರವಾಗುತ್ತದೆ.
ಹೆಚ್ಚಿನ ಸಂಖ್ಯೆಯ ಹುಡುಗಿಯರು ಇದರ ಪ್ರಯೋಜನ ಪಡೆಯಲಿ ಎಂಬ ಉದ್ದೇಶದಿಂದ, ಇದರ ಇದರ ಅರ್ಹತಾ ಮಾನದಂಡಗಳು ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳವಾಗಿ ವಿನ್ಯಾಸಗೊಳಿಸಲಾಗಿದೆ. ಸ್ಕಾಲರ್‌ಶಿಪ್ ಅನ್ನು ಮೆರಿಟ್, ಜಾತಿ, ಆದಾಯ, ಅಥವಾ ಧರ್ಮದ ಆಧಾರದ ಮೇಲೆ ನೀಡಲಾಗುವುದಿಲ್ಲ. ಎಲ್ಲ ಹುಡುಗಿಯರೂ ಅರ್ಜಿ ಸಲ್ಲಿಸಬಹುದು.
ಆಯ್ಕೆಯಾದ ವಿದ್ಯಾರ್ಥಿನಿಯರು ₹1.5 ಲಕ್ಷದವರೆಗೆ ಆರ್ಥಿಕ ನೆರವು ಪಡೆಯುತ್ತಾರೆ. ಅಂದರೆ, ಅವರು ವ್ಯಾಸಂಗ ಮಾಡುತ್ತಿರುವ ಪದವಿ ಕೋರ್ಸ್‌ನ ಅವಧಿಯಲ್ಲಿ (2 ರಿಂದ 5 ವರ್ಷಗಳು) ಪ್ರತಿ ವರ್ಷ ₹30,000 ಪಡೆಯುತ್ತಾರೆ. ಇದನ್ನು ಅವರು ಕಾಲೇಜಿನ ಶೈಕ್ಷಣಿಕ ಶುಲ್ಕ ಪಾವತಿಸಲು ಅಥವಾ ತಮ್ಮ ಶಿಕ್ಷಣ ಪೂರ್ಣಗೊಳಿಸುವ ಸಂದರ್ಭದಲ್ಲಿ ಬರುವ ಇತರ ಖರ್ಚುಗಳನ್ನು ಭರಿಸಲು ಬಳಸಿಕೊಳ್ಳಬಹುದು.
ನಮ್ಮ ವ್ಯಾಪ್ತಿ
ಈ ಯೋಜನೆಯನ್ನು ಹಂತ ಹಂತವಾಗಿ ದೇಶದಾದ್ಯಂತ ವಿಸ್ತರಿಸಲಾಗುತ್ತಿದೆ.
ಮೊದಲ ವರ್ಷದಲ್ಲಿ (2024-25), ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳ 100ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು.
2025-26ರಲ್ಲಿ – ಅಂದರೆ ಯೋಜನೆಯ ಎರಡನೇ ವರ್ಷದಲ್ಲಿ – ಸ್ಕಾಲರ್‌ಶಿಪ್ ಈ ಕೆಳಗಿನ 18 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿದ್ಯಾರ್ಥಿನಿಯರಿಗೆ ಲಭ್ಯವಿತ್ತು: ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ಗಢ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಪುದುಚೇರಿ, ರಾಜಸ್ಥಾನ, ಸಿಕ್ಕಿಂ, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ.
2026-27ರಲ್ಲಿ ಆಂಧ್ರ ಪ್ರದೇಶ ಮತ್ತು ದೆಹಲಿಯನ್ನೂ ಈ ಪಟ್ಟಿಗೆ ಸೇರಿಸಲಾಗಿದೆ.
ಇಲ್ಲಿಯವರೆಗೆ ಸ್ಕಾಲರ್‌ಶಿಪ್ 1.95 ಲಕ್ಷ ವಿದ್ಯಾರ್ಥಿನಿಯರಿಗೆ ನೆರವಾಗಿದ್ದು, ಮುಂದಿನ ವರ್ಷಗಳಲ್ಲಿ ಈ ಸಂಖ್ಯೆ ಗಣನೀಯವಾಗಿ ಹೆಚ್ಚುವ ನಿರೀಕ್ಷೆಯಿದೆ. ಪ್ರತಿ ವರ್ಷ 5 ಲಕ್ಷ ಹುಡುಗಿಯರಿಗೆ ಸ್ಕಾಲರ್‌ಶಿಪ್ ನೀಡುವುದು ನಮ್ಮ ಉದ್ದೇಶ. ಉನ್ನತ ಶಿಕ್ಷಣದ ಕೋರ್ಸ್‌ನ ಸರಾಸರಿ ಅವಧಿ ಮೂರು ವರ್ಷಗಳೆಂದು ಪರಿಗಣಿಸಿದರೆ, ಯಾವುದೇ ವರ್ಷದಲ್ಲಿ ಸುಮಾರು 15 ಲಕ್ಷ ವಿದ್ಯಾರ್ಥಿನಿಯರು ಸ್ಕಾಲರ್‌ಶಿಪ್ ಪಡೆಯುವ ನಿರೀಕ್ಷೆಯಿದೆ.
ಗುಂಪುವಾರು ಸಂಖ್ಯೆಗಳು
ಸ್ಕಾಲರ್‌ಶಿಪ್ ಅರ್ಜಿದಾರರಿಗೆ
ನಿಮಗೆ ಅರ್ಜಿ ಸಲ್ಲಿಸುವ ಯೋಚನೆಯಿದೆಯೇ? ಅರ್ಹತಾ ಮಾನದಂಡ, ಅರ್ಜಿ ಪ್ರಕ್ರಿಯೆ, ಅವಶ್ಯ ದಾಖಲೆಗಳು, ಮತ್ತು ಪ್ರಮುಖ ದಿನಾಂಕಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.